ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನದಿಂದ ಸಮಾಜಕ್ಕೆ ಸಾಂಸ್ಕೃತಿಕ ಸಭ್ಯತೆ : ಹೊಸ್ತೋಟ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಸೆಪ್ಟೆ೦ಬರ್ 16 , 2015
ಸೆಪ್ಟೆ೦ಬರ್ 17, 2015

ಯಕ್ಷಗಾನದಿಂದ ಸಮಾಜಕ್ಕೆ ಸಾಂಸ್ಕೃತಿಕ ಸಭ್ಯತೆ : ಹೊಸ್ತೋಟ

ಶಿರಸಿ : ದೇವರು ಹಾಗೂ ಧರ್ಮಕ್ಕೆ ಹತ್ತಿರವಾದ ಯಕ್ಷಗಾನ ಕಲೆಯಿಂದ ಮಾತ್ರ ಸಮಾಜಕ್ಕೆ ಸಾಂಸ್ಕೃತಿಕ ಸಭ್ಯತೆಯನ್ನು ಸಾರುವ ಯೋಗ್ಯತೆಯಿದೆ. ಇಂತಹ ಕಲೆಯನ್ನು ಸ್ವಂತ ಹಿತಕ್ಕಾಗಿ ಬಳಸಿಕೊಂಡರೆ ಅಂಥವರು ಕೇವಲ ವೇಷಧಾರಿಗಳಾಗುತ್ತಾರೆಯೇ ವಿನಃ ಕಲಾವಿದರಾಗಲು ಸಾಧ್ಯವಿಲ್ಲ ಎಂದು ಯಕ್ಷಋಷಿ ಮಂಜುನಾಥ ಭಾಗವತ ಹೊಸ್ತೋಟ ಅಭಿಪ್ರಾಯಪಟ್ಟರು.

ಸೋಂದಾ ಸ್ವರ್ಣವಲ್ಲೀಯಲ್ಲಿ ನಡೆದ ಮೂರು ದಿನಗಳ ಗೀತನತ್ಯಾನುಸಂಧಾನ ಸಮಾರೋಪದಲ್ಲಿ ಅವರು ಮಾತನಾಡಿದರು. ಯಕ್ಷಕಲೆಯ ಜೀವಾಳವಾಗಿರುವ ಕಲಾವಿದರು ತಮ್ಮಲ್ಲಿನ ಗುಂಪುಗಾರಿಕೆ ಬಿಟ್ಟು ಕಲೆಗಾಗಿ ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರಿಂದ ಸನ್ಮಾನ ಸ್ವೀಕರಿಸಿದ ಹೆಸರಾಂತ ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿ, ಯಕ್ಷಗಾನ ಕಲೆಯಲ್ಲಿ ಹೊಸದಾಗಿ ಪ್ರವೇಶಿಸುವ ಕಲಾವಿದರು ಅಧ್ಯಯನಶೀಲ ಪ್ರವತ್ತಿಯಿಂದ ದೂರ ಉಳಿದಿದ್ದಾರೆ. ಭಾಗವತರು ಹಾಡಿನ ರಾಗ, ತಾಳಗಳ ಅರಿವಿಲ್ಲದೆ ರಂಗಭೂಮಿಯ ಸಾವಿಗೆ ಕಾರಣರಾಗುತ್ತಿದ್ದಾರೆ. ಅರ್ಥವಿಲ್ಲದ ಭಾಗವತಿಕೆ, ಕುಣಿತ, ಅಭಿನಯ, ಸಂಭಾಷಣೆಗಳಿಗೆ ಕಲಾಸಕ್ತರು ಪ್ರೋತ್ಸಾಹಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದರು.

ಸರಕಾರ ಯಕ್ಷಗಾನ ಕಲೆಯನ್ನು ಗುರುತಿಸಿದೆ. ಆದರೆ ಅದರ ಆಯಾಮ ವಿಭಿನ್ನವಾಗಿದ್ದು, ಅದು ಕಲೆಯ ಬೆಳವಣಿಗೆಗೆ ಪೂರಕವಾಗಿಲ್ಲ. ನೆಜ ಕಲಾವಿದರಿಗೆ ಪ್ರೋತ್ಸಾಹಿಸುವ ಕಾರ್ಯ ಸರ್ಕಾರದಿಂದ ಆಗಬೇಕು ಎಂದರು.

ಯಕ್ಷಗಾನಕ್ಕೆ ಪ್ರತ್ಯೇಕ ಪ್ರಶಸ್ತಿ ನೀಡಿ ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಜಿ.ಎಸ್.ಭಟ್ಟ ಮಾತನಾಡಿ, ಸರಕಾರ ಹಲವು ಕ್ಷೇತ್ರಗಳಲ್ಲಿ ಪ್ರಶಸ್ತಿ ನೀಡುತ್ತಿದ್ದರೂ ಯಕ್ಷಗಾನಕ್ಕಾಗಿ ಪ್ರತ್ಯೇಕ ಪ್ರಶಸ್ತಿ ನೀಡುತ್ತಿಲ್ಲ. ಹೀಗಾಗಿ ಯಕ್ಷಶ್ರೀ ಪ್ರಶಸ್ತಿ ಸ್ಥಾಪಿಸಬೇಕು. ಯಕ್ಷಗಾನಕ್ಕೇ ಪ್ರತ್ಯೇಕ ಅಕಾಡೆಮಿ ರಚನೆಯಾಗಬೇಕು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಯಕ್ಷಗಾನ ಪ್ರಸಂಗ ಹಾಗೂ ಪ್ರಸಂಗಕತಗಳ ದಾಖಲೀಕರಣವಾಗಿಲ್ಲ. ಈ ನಿಟ್ಟಿನಲ್ಲಿ ಯಕ್ಷಗಾನ ಕಲೆಗೆ ಆದ್ಯತೆ ನೀಡಲು ಹೊಸ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಯಕ್ಷಗಾನ ಸಂಶೋಧಕ ವಸಂತ ಭಾರದ್ವಾಜ ಮಾತನಾಡಿ, ಕಲಾವಿದರು ಸ್ವಯಂ ವೌಲ್ಯಮಾಪನ ಮಾಡಿಕೊಳ್ಳಬೇಕು. ಕಲಾವಿದ ತನ್ನೊಳಗಿನಿಂದ ಸಮದ್ಧವಾಗದಿದ್ದರೆ ಹೊರಗಿನ ಮನ್ನಣೆ ಸಿಗುವುದು ದುರ್ಲಭ. ವಾಸ್ತವ ಪ್ರಪಂಚದ ಸಷ್ಟಿ ಯಕ್ಷಗಾನದ ಉದ್ದೇಶವಾಗದೆ ಅಲೌಕಿಕ ದಶ್ಯ ನಿರ್ಮಾಣ ಮಾಡಲು ಕಲಾವಿದರು ಮತ್ತು ಭಾಗವತರು ಮುಂದಾಗಬೇಕು. ಪರಂಪರೆಯ ಬೆಳಕಿನೊಡನೆ ಆಧುನಿಕತೆಯ ಆಕಾಂಕ್ಷೆಯು ಕಲಾ ಚೌಕಟ್ಟಿನಲ್ಲಿ ಪ್ರದರ್ಶನಗೊಂಡಾಗ ಕಲೆ ಉನ್ನತೀಕರಣಗೊಳ್ಳುತ್ತದೆ ಎಂದರು.

ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮಠದ ಉಪಾಧ್ಯಕ್ಷ ವಿ.ಎನ್.ಹೆಗಡೆ, ಕಾರ್ಯಕ್ರಮ ಸಂಯೋಜಕ ಎಂ.ಎ.ಹೆಗಡೆ ದಂಟ್ಕಲ್ ಪಾಲ್ಗೊಂಡಿದ್ದರು. ಆರ್.ಎಸ್.ಹೆಗಡೆ ಭೆರುಂಬೆ ಸ್ವಾಗತಿಸಿದರು. ಸುರೇಶ ಹಕ್ಕಿಮನೆ ನಿರೂಪಿಸಿದರು.


ಕೃಪೆ : vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ